ಸ್ವರಾಜ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷತೆಯ ಸದಸ್ಯರಾದ ದೇವನೂರ ಮಹಾದೇವ ಅವರ ಲೇಖನ: ಕೊನೆಗೂ ಪಾಲನೆಯ ಸ್ತ್ರೀಶಕ್ತಿ ಪಾದಗಳಿಗೆ ಶರಣು

ಸ್ವರಾಜ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷತೆಯ ಸದಸ್ಯರಾದ ದೇವನೂರ ಮಹಾದೇವ ಅವರ ಲೇಖನ: ಕೊನೆಗೂ ಪಾಲನೆಯ ಸ್ತ್ರೀಶಕ್ತಿ ಪಾದಗಳಿಗೆ ಶರಣು

ಕೊನೆಗೂ ಪಾಲನೆಯ ಸ್ತ್ರೀಶಕ್ತಿ ಪಾದಗಳಿಗೆ ಶರಣು ಕರಾವಳಿ ಮಣ್ಣಲ್ಲಿ ಹುಟ್ಟಿದ ದೊಡ್ಡ ಮನುಷ್ಯ ಕುದ್ಮಲ್ ರಂಗರಾವ್‍ರನ್ನು ಹಾಗೇ ಕನ್ನಡಕ್ಕೆ ಬೆಟ್ಟದಜೀವ, ಮರಳಿ ಮಣ ್ಣಗೆ ಕಾವ್ಯ ನೀಡಿದ ಶಿವರಾಮ ಕಾರಂತರನ್ನು ನೆನಪಿಸಿಕೊಂಡು ನಮಿಸಿ ಒಂದೆರಡು ಮಾತುಗಳನ್ನಾಡುವೆ. ನಾನು ಕಾವ್ಯ ಎಂದದ್ದು ಬಾಯ್ತಪ್ಪಿನಿಂದ ಅಲ್ಲ; ಭಾವಿಸಿ ಹೇಳಿದೆ. ಕಾರಂತರು ಅಂದರೆ ಹೈಟೆನ್ಸನ್ ವೈರ್ ಎಂದು ನನ್ನ ಪತ್ನಿ ಸುಮಿತ್ರಾ ಆಗಾಗ ಹೇಳುತ್ತಿರುತ್ತಾರೆ. ಕಾರಂತರ ಪ್ರಖರತೆ ಹೈಟೆನ್ಸನ್ ವೈರ್‍ನಂತೆಯೇ ಇತ್ತು. ಅವರ ವೈಖರಿಯನ್ನು ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡಿದ್ದೇನೆ. ಕಾರಂತರು ತಾವು ಬಿಡುಗಡೆ ಮಾಡಬೇಕಿದ್ದ ಪುಸ್ತಕದ […]