ಸ್ವರಾಜ್ ಇಂಡಿಯಾ ಕರ್ನಾಟಕದ ಉಪಾಧ್ಯಕ್ಷರಾದ ಚುಕ್ಕಿ ನಂಜುಂಡಸ್ವಾಮಿ ಅವರೊಂದಿಗೆ ಮಲ್ಲಿಗೆ ಸಿರಿಮನೆಯವರು ನಡೆಸಿದ ಮಾತುಕತೆ ರೈತ ಚಳವಳಿಯ ಪ್ರಮುಖ ನಾಯಕರಾಗಿ ನಮಗೆ ಪುರುಷರು ಹೆಚ್ಚು ಕಂಡರೂ , ಅದರ ಹಿಂದೆ ನಿಂತಿದ್ದ ಶಕ್ತಿ ಮಹಿಳೆಯರದ್ದೇ! ನಿಜವಾಗಿ ಹೇಳಬೇಕೆಂದರೆ, ಬೇರೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲದೆ ರೈತ ಚಳವಳಿಯನ್ನು ಗಟ್ಟಿಯಾಗಿ ನಿಂತು ನಡೆಸಿದವರು, ನಡೆಸುತ್ತಿರುವವರು, ಅದನ್ನು ಪೂರ್ಣವಾಗಿ ಬೆಂಬಲಿಸಿದವರು ರೈತ ಮಹಿಳೆಯರೇ ಆಗಿದ್ದಾರೆ ಮಹಿಳಾ ಹಕ್ಕುಗಳ ಕುರಿತು ಮಹಿಳಾ ದಿನಾಚರಣೆಯಂದು ದೊಡ್ಡ ಚರ್ಚೆ ನಡೆಯುತ್ತದೆ. ಕರ್ನಾಟಕದಲ್ಲಿ ರೈತ ಚಳವಳಿಗೆ ದೊಡ್ಡ ಇತಿಹಾಸವೇ ಇದೆ. ಈ ಚಳವಳಿಯ ಯಶಸ್ಸಿನಲ್ಲಿ […]
